ಕ್ರೀಡೆ

ವೀಡಿಯೋ: ಐಡಿ ಕಾರ್ಡ್ ತರದ ಫೆಡರರ್ ಗೆ ಕ್ರೀಡಾಂಗಣ ಪ್ರವೇಶಿಸಲು ತಡೆದ ಸಿಬ್ಬಂದಿ!

Raghavendra Adiga
ಮೆಲ್ಬೋರ್ನ್: ಟೆನ್ನಿಸ್ ದಿಗ್ಗಜ ಆಟಗಾರ ರೋಜರ್ ಫೆಡರರ್ ನಾವು ಭಾವಿಸಿದಷ್ಟು ಪ್ರಸಿದ್ದರಲ್ಲವೆ? ಏಕೆಂದರೆ ಅವರು ಆಸ್ಟ್ರೇಲಿಯನ್ ಓಪನ್ ನಲ್ಲಿ ಆಡಲು ಕ್ರೀಡಾಂಗಣಕ್ಕೆ ತೆರಳುವ ಮುನ್ನ ತಮ್ಮ ಟೂರ್ನಮೆಂಟ್ ಐಡಿ ಪ್ರದರ್ಶಿಸಬೇಕಾಗಿತ್ತು!
ನಿಯಮ ಎಂದ್ರೆ ನಿಯಮ ಅಷ್ಟೆ!
ಮೆಲ್ಬೋರ್ನ್ ಪಾರ್ಕ್ ನಲ್ಲಿ  ಫೆಡರರ್ ಆರು ಬಾರಿ ಚಾಂಪಿಯನ್ ಆಗಿದ್ದರೆ, ವೃತ್ತಿ ಜೀವನದಲ್ಲಿ ಅವರು ಒಟ್ಟಾರೆ 20 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳ ಒಡೆಯ. ಅತಿ ಹೆಚ್ಚು ವಾರಗಳ ಕಾಲ ವಿಶ್ವ ನಂ. 1 ಟೆನ್ನಿಸ್ ಆಟಗಾರರಾಗಿದ್ದ ಫೆಡರರ್ ವಿಶ್ವ ಪ್ರಸಿದ್ದ ಕ್ರೀಡಾಪಟುಗಳಲ್ಲಿ ಒಬ್ಬರು.
ಆದರೆ ಇದೀಗ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿರುವ ಒಂದು ವೀಡಿಯೋದಿಂದಾಗಿ ಫೆಡರರ್ ನಾವೆಂದುಕೊಂಡಷ್ಟು ಜನಪ್ರಿಯರಲ್ಲ ಎಂದೆನಿಸುತ್ತಿದೆ. ಏಕೆಂದರೆ ಈ ವೀಡಿಯೋದಲ್ಲಿ ಫೆಡರರ್ ಗ್ರ್ಯಾಂಡ್ ಸ್ಲ್ಯಾಮ್ ಪಂದ್ಯಾವಳಿಯ ಸ್ಥಳಕ್ಕೆ ತೆರಳುವ ಮುನ್ನ ಭದ್ರತಾ ಸಿಬ್ಬಂದಿ ಅವರನ್ನು ನಿಲ್ಲಿಸುತ್ತಾರೆ.ಅದೂ ಲಾಕ್ ಆಗಿರುವ ಡೋರ್ ನ ಹೊರಭಾಗದಲ್ಲಿ ಫೆಡರರ್ ನಿಂತಿರುತ್ತಾರೆ. ಈ ವೇಳೆ ಫೆಡರರ್ ಆಸ್ಟ್ರೇಲಿಯನ್ ಓಪನ್ ಅಕ್ರಿಡಿಟೇಶನ್ ಪಾಸ್ ಕಳೆದುಕೊಂಡಿರುವುದನ್ನು ಸಿಬ್ಬಂದಿ ಸೂಚಿಸುಸಿದ್ದಾರೆ.
ಆಟಗಾರರು, ತರಬೇತುದಾರರು, ಅಧಿಕಾರಿಗಳು, ಮಾಧ್ಯಮದ ಸದಸ್ಯರು ಮತ್ತು ಇತರರು ತಮ್ಮ ಹೆಸರು, ಭಾವಚಿತ್ರ, ಟೂರ್ನಮೆಂಟ್ ನಲ್ಲಿ ಏನಾಗಿದ್ದೇವೆ ಂಬ ವಿವರ, ಭದ್ರತಾ ಸಿಬ್ಬಂದಿಗಳು ಚೆಕ್ ಪಾಯಿಂಟ್ ಗಳಲ್ಲಿ  ಸ್ಕ್ಯಾನ್ ಮಾಡಬಹುದಾದ ಬಾರ್ ಕೋಡ್ ಗಳನ್ನು ಈ ಅಕ್ರಿಡಿಟೇಶನ್ ಪಾಸ್ ಹೊಂದಿರಲಿದೆ.
SCROLL FOR NEXT